udupimitra.in
  • August 12, 2026
  • Last Update August 12, 2026 2:52 pm
  • Brahmavara

ಸಂಘ-ಸಂಸ್ಥೆಗಳ ಪ್ರಯತ್ನದಿಂದ ಕುಂದಾಪ್ರ ಕನ್ನಡದ ಹಿಂಜರಿಕೆ ದೂರ: ಶಾಸಕ ಕಿರಣ್ ಕುಮಾರ್ ಕೊಡ್ಗಿ

ಸಂಘ-ಸಂಸ್ಥೆಗಳ ಪ್ರಯತ್ನದಿಂದ ಕುಂದಾಪ್ರ ಕನ್ನಡದ ಹಿಂಜರಿಕೆ ದೂರ: ಶಾಸಕ ಕಿರಣ್ ಕುಮಾರ್ ಕೊಡ್ಗಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಅ.೧೨: ಕುಂದಾಪ್ರ ಕನ್ನಡ ಸೀಮಿತ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಹೊರಗಡೆ ಹೋದಾಗ ಅಂದು ಮಾತನಾಡುವಾಗ ಹಿಂಜರಿಕೆ ಇತ್ತು. ಕುಂದಾಪ್ರ ಕನ್ನಡ ಹಬ್ಬದ ಆಚರಣೆ ಆರಂಭದ ನಂತರ ನಮ್ಮ ಭಾಷೆ, ಸಂಸ್ಜೃತಿ ಎಲ್ಲೆಡೆ ಹರಡಿದ್ದು ಹಿಂಜರಿಕೆ ನಿವಾರಣೆಯಾಗಿದೆ. ಭಾಷೆ ಸಂಸ್ಕೃತಿ ಹರಡಬೇಕಾದಲ್ಲಿ ಸಂಘ ಸಂಸ್ಥೆಗಳು ಹೆಚ್ಚು ಪ್ರಯತ್ನಿಸಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು.


ಅವರು ಜನಸೇವಾ ಟ್ರಸ್ಟ್, ಟೀಮ್ ಅಭಿಮತದ ಜಂಟಿ ಆಶ್ರಯದಲ್ಲಿ ಯಡ್ತಾಡಿ ಅಲ್ತಾರು ಪಡುಮನೆಯಲ್ಲಿ ನಡೆದ ಕುಂದಾಪ್ರ ಕನ್ನಡ ಹಬ್ಬ ಆಚರಣೆಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಶೆಟ್ಟಿ ಮಾತನಾಡಿ ಎಲ್ಲರೂ ತಮ್ಮ ತಮ್ಮ ನೆಲಮೂಲದ ಸಂಸ್ಜೃತಿಯನ್ನು ಉಳಿಸಿಕೊಂಡು ಹೋಗಬೇಕು. ದೇಶಿ ಸಂಸ್ಕ್ರತಿಯನ್ನು ತಾಯಿಯನ್ನು ಪ್ರೀತಿಸಿದಂತೆ ಪ್ರೀತಿಸಬೇಕು. ಜಾಗತೀಕರಣದ ನಡುವೆ ಸ್ಥಳಿಯ ಭಾಷೆಗಳು ಕೊಚ್ಚಿ ಹೋಗುವುದು ಸರಿಯಲ್ಲ. ನಮ್ಮ ಭಾಷೆ, ಸಂಸ್ಜೃತಿ ಉಳಿಸಿಕೊಂಡು ಮುಂದಿನ ತಲೆ ಮಾರಿಗೆ ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ನುಡಿದರು.


ಶೇಡಿಕೊಡ್ಲು ವಿಠಲ ಶೆಟ್ಟಿ, ಅಲ್ತಾರು ಪಡುಮನೆಯ ಯಜಮಾನಿ ಶ್ರೀಮತಿ ಶಕೀಲ ಹೆಗ್ಡೆ, ಮಂದಾರ್ತಿಯ ಗ್ರ್ಯಾವಿಟಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯಸ್ಥ ಮನು ಹಂದಾಡಿ, ಜೈಗಣೇಶ್ ಸೌಹಾರ್ದ ಸಹಕಾರಿ ಸಂಘ ನಿ. ಸಾಹೇಬರಕಟ್ಟೆ ಇದರ ಅಧ್ಯಕ್ಷ ಅಶೋಕ್ ಪ್ರಭು ಸಾಹೇಬರಕಟ್ಟೆ, ಉದಯ ಶೆಟ್ಟಿ ಪಡುಕೆರೆ ವೇದಿಕೆಯಲ್ಲಿದ್ದರು.
ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್, ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ ಹಾರಾಡಿ, ದಿನೇಶ್ ಹೆಗ್ಡೆ ಹೆಗ್ಗುಂಜೆ, ನಿರಂಜನ್ ಶೆಟ್ಟಿ ಕೊಳ್ಕೆಬೈಲು, ಉದ್ಯಮಿ ಸಂದೀಪ್ ಶೆಟ್ಟಿ ಶಿರಿಯಾರ ಮೇಲ್ಮನೆ,ಹಂದಾಡಿ ಆಂಡ್ರೋ ಡಿಸಿಲ್ವಾ, ನಿತ್ಯಾನಂದ ಶೆಟ್ಟಿ ಕಾಡೂರು, ಸುಧೀರ್ ಕುಮಾರ್ ಶೆಟ್ಟಿ ನೀಲಾವರ, ಮಹೇಶ್ ಶೆಟ್ಟಿ ಮಾರಾಳಿ, ಲಕ್ಷ್ಮಣ ಶೆಟ್ಟಿ ಅಲ್ತಾರ್,ಕೆ. ಭೋಜ ಪೂಜಾರಿ ಚಿತ್ರಪಾಡಿ, ಕುಶ ಆಚಾರ್ಯ ಬನ್ನಾಡಿ, ಶರತ್ ಶೆಟ್ಟಿ, ಪ್ರವೀಣ್ ಯಕ್ಷಿಮಠ ಇನ್ನಿತರರು ಭಾಗವಹಿಸಿದ್ದರು.

ಜನಸೇವಾ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಕುಂದಾಪುರ ಕನ್ನಡ ನೆಲಮೂಲದ ಸಂಸ್ಕೃತಿ ನೆನಪಿಸುವ ರೀತಿಯಲ್ಲಿ ಕಾರ್ಯಕ್ರಮಕ್ಕೆ ನೀಡಲಾಗುತ್ತಿದ್ದು ಈ ಬಾರಿಯ ಅಷಾಢದ ವಿಶೇಷ ತಿನಿಸು ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ
ಕ್ಯಾನಿಗಡ್ಡೆ ಹಿಟ್ಟಿನ ಮಿಸಾಲ್ ಇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಲ್ತಾರುಪಡುಮನೆ ಯಜಮಾನಿ ಶಕಿಲಾ ಹೆಗ್ಡೆ ಕ್ಯಾನಿಗೆಡ್ಡೆ ಮಿಸಲಿರಿಸಿದರು. ಮನು ಹಂದಾಡಿ ಕ್ಯಾನಿಗೆಡ್ಡೆ ಮಹತ್ವ ತಿಳಿಸಿದರು ಹಾಗೂ ಎ.ಐ. ತಂತ್ರಾಂಶದಲ್ಲಿ ಪ್ರಪಂಚದ ಎಲ್ಲ ಭಾಷೆಗಳ ಮಾಹಿತಿ ಇದೆ ಆದರೆ ಕುಂದಾಪುರ ಕನ್ನಡದ ಲಭ್ಯತೆ ಇಲ್ಲ. ಮುಂದಿನ ದಿನದಲ್ಲಿ ಎ.ಐ.ಗೆ ಕುಂದಾಪುರ ಕನ್ನಡ ತಂತ್ರಾಂಶ ಜೋಡಿಸುವ ಕಾರ್ಯವಾಗಬೇಕು ಎನ್ನುವ‌ ನಿರ್ಣಯವನ್ನು ಕೈಗೊಳ್ಳಲಾಯಿತು.
ಜನಸೇವಾ ಟ್ರಸ್ಟ್ ನ ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಪ್ರಣೂತ್ ಗಾಣಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

administrator

Related Articles

Leave a Reply

Your email address will not be published. Required fields are marked *

You cannot copy content of this page